Navaratri / Dasara / ನವರಾತ್ರಿ / ದಸರಾ ಹಬ್ಬ
ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿ ಸುವುದರಿಂದ ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ ಗೊಂಬೆ/ಬೊಂಬೆ ಹಬ್ಬ ಎಂದೂ ಹೆಸರಿದೆ. ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ , ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು: ಸರಸ್ವತಿ ಪೂಜೆ/ಹಬ್ಬ - ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಗೆ ಪೂಜೆ. ದುರ್ಗಾಷ್ಟಮಿ - ಅಷ್ಟಮಿ ದಿನ ದುರ್ಗಾ ದೇವಿಯ ಆರಾಧನೆ. ಮಹಾನವಮಿ / ಆಯುಧ ಪೂಜೆ - ನವಮಿಯ ದಿನ ಆಯುಧಾಗಳಿಗೆಲ್ಲ ಪೂಜೆ ಮಾಡುತ್ತಾರೆ. ವಿಜಯದಶಮಿ - ದಶಮಿಯ ದಿನ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯವನ್ನು ಆಚರಿಸುತ್ತಾರೆ. ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವ...