Posts

ಮಹಾಶಿವರಾತ್ರಿ ಹಬ್ಬ : ಓಂ ನಮಃ ಶಿವಾಯ

Image
ಮಹಾ   ಶಿವರಾತ್ರಿ  ಹಬ್ಬವನ್ನು ಮಾಘ ಮಾಸದ ಬಹುಳ/ಕೃಷ್ಣ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ರಾತ್ರಿಯಲ್ಲಿ ಇರಬೇಕು. ಈ ದಿನ ಬೆಳಿಗ್ಗೆ ಮಂಗಳ ಸ್ನಾನ ಮಾಡಿ, ಈಶ್ವರನಿಗೆ ಷೋಡಶೋಪಚಾರದಿಂದ   ಪೂಜೆಮಾಡಬೇಕು.  ಈ ದಿನದ ವಿಶೇಷ ಪೂಜಾ ಸಾಮಾಗ್ರಿ  ಬಿಲ್ವ   ಪತ್ರೆ . ಬಿಲ್ವ ಪತ್ರೆ ಈಚ್ವರನಿಗೆ ಪ್ರಿಯವಾದುದ್ದು. ಇದರ ಒಂದು ಎಲೆಯನ್ನು ಶಿವನಿಗೆ ಅರ್ಪಿಸಿದರೂ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಅಂಬ ನಂಬಿಕೆ ಇದೆ. ಶಿವಲಿಂಗಕ್ಕೆ ಪಂಚಾಮೃತ ಮತ್ತು ಬಿಲ್ವ ಪತ್ರೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಇಡೀ ದಿನ ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ ಮಾರನೆಯ ದಿನ ಪಾರಣೆ ಮಾಡಬೇಕು. ಉಪವಾಸ ಮಾಡಲು ಆಗದಿದ್ದರೆ, ಫಲಹಾರ ಮಾಡುತ್ತಾರೆ. ಶಿವ  ರಾತ್ರಿ  ಎಂಬ ಹೆಸರಿಗೆ ತಕ್ಕಂತೆ ಹಗಲಿನ ಜೊತೆಗೆ ರಾತ್ರಿಯೂ ಶಿವನ ಪೂಜೆ, ಆರಾಧನೆಮಾಡುತ್ತಾರೆ.  ಜಾವ  ( ಯಾಮ)   - ದಿವಸದ ಎಂಟನೆಯ ಒಂದು ಭಾಗದಷ್ಟು ಕಾಲ, ಮೂರು ಗಂಟೆ ಕಾಲ ಎಂದರ್ಥ.  ರಾತ್ರಿಯ 4 ಜಾವಗಳಲ್ಲೂ ಈಶ್ವರನಿಗೆ ಅಭಿಷೇಕ ಪೂಜೆ ಮಾಡುತ್ತಾರೆ. ಈಶ್ವರನ ಭಜನೆ, ಹಾಡು, ಸ್ತೋತ್ರಗಳನ್ನು ಹೇಳುತ್ತಾ ಜಾಗರಣೆ ಮಾಡುತ್ತಾರೆ. ಹೀಗೆ ದಿನವಿಡೀ ಶಿವನ ಧ್ಯಾನದಲ್ಲಿ ಕಳೆಯಬೇಕು. ನಮ್ಮ ಮನೆಯಲ್ಲಿ ಶಿವರಾತ್ರಿ ದೊಡ್ಡ ಹಬ್ಬ.  ಈ ದಿನ ಸಾಮಾನ್ಯವಾಗಿ ಈಶ್ವರ ದೇವಾಲಯಗಳಲ್ಲಿ ರಾತ್ರಿ ಇಡೀ ಪ...

ದೀಪಾವಳಿ ಹಬ್ಬ : ತ್ರಯೋದಶಿ ದಿನ - ನೀರು ತುಂಬುವ ಹಬ್ಬ, ಚತುರ್ದಶಿ ದಿನ - ನರಕ ಚತುರ್ದಶಿ, ಅಮಾವಾಸ್ಯೆ ದಿನ - ಧನ ಲಕ್ಷ್ಮೀ ಪೂಜೆ, ಪಾಡ್ಯ ದಿನ - ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ

Image
ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀ ಪಾವಳಿ ಅಂದರೆ ೩-೪ ದಿನದ ಹಬ್ಬ. ತ್ರಯೋದಶಿ   ದಿನ  -  ನೀರು   ತುಂಬುವ   ಹಬ್ಬ ಚತುರ್ದಶಿ   ದಿನ  -  ನರಕ   ಚತುರ್ದಶಿ ಅಮಾವಾಸ್ಯೆ   ದಿನ  -  ಧನ   ಲಕ್ಷ್ಮೀ   ಪೂಜೆ ಪಾಡ್ಯ   ದಿನ  -  ಬಲಿ   ಪಾಡ್ಯಮಿ  / ಬಲೀಂದ್ರನ   ಪೂಜೆ ನೀರು   ತುಂಬುವ   ಹಬ್ಬ  - ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ  ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇರಬಹುದು. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ  ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು.ಹೀಗಾಗಿ ಈ ದಿನ ನೀರುಹಿಡಿಯುವುದರಲ್ಲೇ ಕಳೆದು ಹೋಗುತ್ತಿತ್ತು ಅನ್ನಿಸುತ್ತದೆ.ಅದಕ್ಕೆ  ಈ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ ಬಂತೇನೋ.ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ :) ನರಕ  ...

Navaratri / Dasara / ನವರಾತ್ರಿ / ದಸರಾ ಹಬ್ಬ

Image
ನವರಾತ್ರಿ / ದಸರಾ ಹಬ್ಬ ಕರ್ನಾಟಕದ ಒಂದು ಮುಖ್ಯ ಹಬ್ಬ. ಇದನ್ನು ಆಶ್ವಯುಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರತಿಪದ್ (ಪಾಡ್ಯ) ಇಂದ ದಶಮಿವರಗೆ ಆಚರಿಸುತ್ತಾರೆ. ಇದನ್ನು ಶರದ್ ಋತುವಿನಲ್ಲಿ ಆಚರಿ ಸುವುದರಿಂದ  ಶರನ್ನವರಾತ್ರಿ ಎಂದೂ ಕರೆಯುತ್ತಾರೆ. ಗೊಂಬೆಗಳನ್ನು ಅಲಂಕಾರ ಮಾಡಿ ಸಜ್ಜಾಗಿ ಜೋಡಿಸುತ್ತಾರೆ. ಆದ್ದರಿಂದ ಇದಕ್ಕೆ  ಗೊಂಬೆ/ಬೊಂಬೆ ಹಬ್ಬ  ಎಂದೂ ಹೆಸರಿದೆ.   ನವರಾತ್ರಿ ಅಂದರೆ 9 ರಾತ್ರಿಗಳು. ಈ ಹತ್ತು ದಿನಗಳು ದೇವಿ/ಆದಿಶಕ್ತಿಯನ್ನು ದುರ್ಗಾ , ಸರಸ್ವತಿ, ಲಲಿತ, ಭವಾನಿ, ಲಕ್ಷ್ಮಿ, ಚಾಮುಂಡೇಶ್ವರಿ, ಚಂಡಿಕ, ಕಾಳಿ ಎಂದು ವಿವಿಧ ರೂಪದಲ್ಲಿ ಆರಾಧಿಸಿ ಪೂಜಿಸುತ್ತಾರೆ. ಇದರಲ್ಲಿ ವಿಶೇಷವಾದ ದಿನಗಳು:  ಸರಸ್ವತಿ ಪೂಜೆ/ಹಬ್ಬ - ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಗೆ ಪೂಜೆ. ದುರ್ಗಾಷ್ಟಮಿ  - ಅಷ್ಟಮಿ ದಿನ ದುರ್ಗಾ ದೇವಿಯ ಆರಾಧನೆ. ಮಹಾನವಮಿ / ಆಯುಧ ಪೂಜೆ  - ನವಮಿಯ ದಿನ ಆಯುಧಾಗಳಿಗೆಲ್ಲ ಪೂಜೆ ಮಾಡುತ್ತಾರೆ. ವಿಜಯದಶಮಿ  - ದಶಮಿಯ ದಿನ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯವನ್ನು ಆಚರಿಸುತ್ತಾರೆ. ನವರಾತ್ರಿಯನ್ನು ಆಚರಿಸುವುದರ ಹಿಂದೆ ಹಲವು ಕಥೆಗಳಿವೆ.ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು , ಶ್ರೀರಾಮನು ರಾವಣನನ್ನು ಸಂಹಾರ ಮಾಡಿದನು ಎಂದು ನಂಬಿಕೆ ಇದೆ. ಪಾಂಡವರು ಒಂದು ವ...

ಗಣಪತಿಯ ಬಗೆ ಬಗೆಯ ಅವತಾರಗಳು ಇವೆ:

Image
ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.* *ಬಾಲ ಗಣಪತಿ*     ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.         *ತರುಣ ಗಣಪತಿ*     ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.         *ಭಕ್ತಿ ಗಣಪತಿ*     ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.         *ವೀರ ಗಣಪತಿ*     ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.         *ಶಕ್ತಿ ಗಣಪತಿ*  ...

ನಾಗ ಪಂಚಮಿ ಕಥೆ : ಪುರಾಣ : ನಾಗ ಪಂಚಮಿಯ ವೈಶಿಷ್ಟ್ಯ: ಉಪವಾಸದ ಮಹತ್ವ:ನಾಗನ ಮಹಾತ್ಮೆ:ಪೂಜೆ

Image
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ. ನಾಗ ಪಂಚಮಿ ಕಥೆ ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ - ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪುರಾ...

ರಕ್ಷಾ ಬಂಧನದ ಆಚರಣೆ ಏಕೆ ಮಹತ್ವಪೂರ್ಣ? ರಾಖಿಯ ಐತಿಹಾಸಿಕ ಉಲ್ಲೇಖಗಳು.

Image
ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯನ್ನು ಇರುವ ಹಬ್ಬವೇ ರಕ್ಷಾ ಬಂಧನ. ಇವರ ನಡುವಿನ ಪ್ರೀತಿಯನ್ನು ಸಾರಲು ಇಲ್ಲಿ ರಾಖಿಯನ್ನು ಕಟ್ಟಲಾಗುತ್ತದೆ. ಮೂಲತಃ ರಾಖಿಯು ಒಂದು ದಾರದಿಂದ ಸಿದ್ಧಗೊಳ್ಳುತ್ತಿತ್ತು. ಆದರೆ ಇಂದು ಅದು ಒಂದು ವಿವಿಧ ಶೈಲಿಯ ವಿನ್ಯಾಸದ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂದು ನಿಮ್ಮ ಭಾವನೆಗೆ ತಕ್ಕ ಹಾಗೆ ಆಧುನಿಕವಾದ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನಿಮ್ಮ ಸೋದರ ನಿಜಕ್ಕು ನಿಮಗೆ ವಿಶೇಷವಾಗಿದ್ದರೆ, ಆತನಿಗಾಗಿ ಒಂದು ವಿಶೇಷವಾದ ರಾಖಿಯನ್ನು ಕೊಂಡುಕೊಳ್ಳಿ. ನಿಮಗೆ ಮಾರುಕಟ್ಟೆಯ ರಾಖಿಯು ಹಿಡಿಸದಿದ್ದಲ್ಲಿ, ನೀವೇ ಸ್ವತಃ ರಾಖಿಯನ್ನು ತಯಾರಿಸಿಕೊಳ್ಳಬಹುದು. ಇದು ಸರಳ ಮತ್ತು ಕಡಿಮೆ ಬೆಲೆಯು ಸಹ ಹೌದು. ಇದು ಎಷ್ಟು ಬೆಲೆ ಬಾಳುತ್ತದೆ ಎಂಬುದಕ್ಕಿಂತ, ನೀವು ತಯಾರಿಸಿದಿರಿ ಎಂಬ ಕಾರಣಕ್ಕೆ ನಿಮ್ಮ ಅಣ್ಣನ ಮುಖದಲ್ಲಿ ಇದು ಪ್ರೀತಿ ತುಂಬಿದ ಮುಗುಳ್ನಗೆಯನ್ನು ತರಿಸುವ ಸಾಮಾರ್ಥ್ಯವನ್ನು ಹೊಂದಿರುತ್ತದೆ. ಪ್ರತಿ ವರ್ಷವು ನೀವು ನಿಮ್ಮ ಸೋದರನಿಗಾಗಿ ಹಲವಾರು ಅಂಗಡಿಗಳನ್ನು ಅಲೆದು ಅಲೆದು ಒಂದು ರಾಖಿಯನ್ನು ಖರೀದಿಸಿರಬಹುದು. ಆದರೆ ಈ ವರ್ಷ ಈ ರಾಖಿ ದಿನಕ್ಕಾಗಿ ನಿಮ್ಮ ಸೋದರನಿಗಾಗಿ ನೀವೇ ಸ್ವತಃ ರಕ್ಷಾ ಬಂಧನವನ್ನು ತಯಾರಿಸಿ. ಇದಕ್ಕಾಗಿ ಕೇವಲ 20 ನಿಮಿಷಗಳ ಕಾಲ ಮಾತ್ರ ತಗುಲುತ್ತದೆ. ರಾಖಿಯ ಕುರಿತಾದ ಪುರಾಣಗಳು ಮತ್ತು ದಂತಕತೆಗಳು ರಕ್ಷಾಬಂಧನದ ಸುತ್ತ ಹಲವಾರು ಪುರಾಣಗಳು ಇವೆ...

ನಾಗರ ಪಂಚಮಿ : ತುಳುನಾಡ್.

Image
    ನಮ್ಮ ತುಳುನಾಡ್ ಅವೇತೋ ದೈವದೇವೆರ್ ನೆಲೆಯಾಯಿ ಪುಣ್ಯಮಣ್ಣ್ ಆಂಡಲಾ ನಮ್ಮ ಈ ಪುಣ್ಯನೆಲಟ್ ನಾಗರಾಧನೆಗ್ ಬಾರೀ ಮಹತ್ವ ಉಂಡು.    ಈ ಪವಿತ್ರ ಭೂಮಿದ ಆರಾಧ್ಯ ದೇವೆರ್ ನಾಗದೇವೆರ್, ಒಂಜಿ ಕಾಲಡ್ ಈ ತುಳುನಾಡ್ ಕಡಲ್ದ ಉಲಯಿ ನಾಗಲೋಕ ಆದಿತ್ತುದ್, ಪರಶು ರಾಮ ದೇವೆರೆ ಕುಡರಿ ಬೂರ್ದ್ ಕಡಲ್ ಪಿರ ಜಾರ್ದ್ ಈ ತುಳುನಾಡ್ಡ ನೆಲ ಸ್ರಷ್ಠಿ ಆಂದ್ ಪನ್ಪಿ ನಂಬೊಳಿಗೆಲಾ ಉಂಡು. ಒಂಜಿಕಾಲದ್ ಈ ಮಣ್ಣ್ ನಾಗಲೋಕ ಆಯಿನೆರ್ದವರ ಇನಿಕ್ಲಾ ನಾಗ ದೇವೆರೆನ ಪೂಜೆಗ್ ಬಾರೀ ಉಚ್ಚಯದ ಸ್ಥಾನಮಾನ ಉಂಡು.     ಈ ನೆಲಟ್ ಆವೇತೊ ಮುಖ್ಯ ನಾಗಕ್ಷೇತ್ರಲ್ ಉಂಡು. ಕುಡುಪು, ಸುಬ್ರಮಣ್ಯ, ತೊಕೂರು, ವರ್ಕಾಡಿ ದಂಚಿನ ಪುಣ್ಯಕ್ಷೇತ್ರಲ್ ಉಂಡ್, ಆತೇ ಅತ್ತಂದೆ ಪ್ರತೀ ದೇವಸ್ಥಾನಡ್ಲಾ ವಿಶೇಷವಾಯಿ ನಾಗಸಾನಿಧ್ಯ ಉಂಡು. ನಾಗರ ಪಂಚೆಮಿ ಮಾತ್ರ ಅತ್ತಂದೆ ಚಂಪಾ ಷಷ್ಠಿ, ಪಂಚೆಮಿ, ತಿಂಗೊಲ್ದ ಸೇವೆಲ್, ಪ್ರತೀ ನಿತ್ಯ ತಂಬಿಲ, ಆಶ್ಲೇಷ ಬಲಿಪೂಜೆ ಇಂಚ ನಾಗ ದೇವೆರ್ ತುಳುನಾಡ್ದ ಭಕ್ತ ಜನಕ್ಲೆರ್ದ್ ನಿತ್ಯ ಪೂಜೆ ಪಡೆಯೊಂನ್ನ ಪ್ರತ್ಯಕ್ಷ ದೇವೆರ್.     ಈ ಪರಮ ಪವಿತ್ರ ನೆಲಟ್ ನಾಗರಪಂಚೆಮಿ ಪಂಡ ಬಾರಿ ಮಲ್ಲ ಪರ್ಬ, ಪ್ರತೀ ಇಲ್ಲರ್ದಲಾ ಜನಕುಲ್ ಗ್ರಾಮದ, ಜಾಗೆದ,ಮುಖ್ಯವಾದ್ ಕುಟುಂಬದ ನಾಗದೇವೆರೆಗ್ ತನು ಮೈಪುನವು ಬಾರೀ ವಿಶೇಷ. ನಾಗದೇವೆರೆಗ್ ತನು ತಂಬಿಲ ಸೇವೆ, ಪಂಚಾಮ್ರತ ಸೇವೆ, ಆಶ್ಲೇಷ ಪೂಜೆ ಇಂಚ ವಿಶೆಷವಾದ್ ಪೂಜೆಪಡೆರ್ ನಮ್...