ಶ್ರೀರಾಮನವಮಿ ಶುಭಾಶಯಗಳು



ವಿಜಯನಾಮ ಸಂವತ್ಸರ, ವಸಂತ ಋತು, ಚೈತ್ರಮಾಸ ಏಪ್ರಿಲ್ 19 ಶುಕ್ರವಾರದಂದು ಕೌಸಲ್ಯಾ ಸುಪ್ರಜಾ, ಮರ್ಯಾದಾ ಪುರುಷೋತ್ತಮ, ಏಕಪತ್ನೀವ್ರತಸ್ಥ, ಅಯೋಧ್ಯೆಯ ಚಕ್ರವರ್ತಿ ಶ್ರೀರಾಮಚಂದ್ರನ ಹುಟ್ಟುಹಬ್ಬ. ಪ್ರಾಚೀನ ಭಾರತದ ಮೇರು ಕೃತಿ ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕನನ್ನು ಸ್ಮರಿಸಿಕೊಳ್ಳುವ ದಿನ. ಆತನ ಜನ್ಮದಿನಕ್ಕೆ ಹಬ್ಬದ ಮಹತ್ವ.
ಸಾಮಾನ್ಯವಾಗಿ ಹಿಂದೂ ಮನೆಗಳಲ್ಲಿ ದೇವರ ಪಟಗಳನ್ನು ಗೋಡೆಯ ಮೋಲೆ ತೂಗುಹಾಕುವುದು ಪದ್ಧತಿ. ಮನೆಯ ಪೂರ್ವಜರ ಚಿತ್ರಗಳ ಜತೆಗೆ ವೀಣಾಪಾಣಿ ಸರಸ್ವತಿ, ಬಂಗಾರದ ನಾಣ್ಯಗಳನ್ನು ಕೈಯಿಂದ ಉದುರಿಸುತ್ತಿರುವ ಲಕ್ಷ್ಮೀ, ವಿಘ್ನನಾಶಕ ಗಣಪತಿ, ಸಂಜೀವಿನಿ ಪರ್ವತ ಹೊತ್ತು ಹಾರುತ್ತಿರುವ ಆಂಜನೇಯನ ಚಿತ್ರಪಟಗಳ ಸಾಲಿನಲ್ಲಿ ಸೀತಾ ಲಕ್ಷ್ಮಣ ಸಮೇತ ರಾಮನ ಫೋಟೋ ರಾರಾಜಿಸುವುದು. ಇದಲ್ಲದೆ ಅವರವರ ಮನೆ ದೇವರ ಫೋಟೋಗಳು ದೇವರ ಚಿತ್ರಗಳ ಸಾಲಿನಲ್ಲಿ ಇರುತ್ತವೆ.
ರಾಮ ಹೇಗಿದ್ದ, ಸೀತಾ ಹೇಗಿದ್ದಳು ನಾವೇನೂ ನೋಡಿಲ್ಲ. ಆದರೆ ಅವರಿಗೆಲ್ಲ ಒಂದು ಮನುಷ್ಯ ಆಕಾರ, ವೇಷ ಭೂಷಣ ಕಲ್ಪಿಸಿ ದೇವರು ಎಂದರೆ ಇವರೇ ಎಂದು ತೋರಿಸಿಕೊಟ್ಟವರು ಭಾರತೀಯ ಪಾರಂಪರಿಕ ಚಿತ್ರ ಕಲಾವಿದರು. ಭಕ್ತರು ದೇವರನ್ನು ಮನಸಾ ನೆನೆಯುವಾಗ ಈ ಕಲಾವಿದರನ್ನೂ ನೆನೆದರೆ ಚೆನ್ನ. ಎಷ್ಟೋ ವೇಳೆ ಈ ಚಿತ್ರ ಬಿಡಿಸಿದ ಕಲಾವಿದ ಯಾರು ಎಂಬುದೇ ಗೊತ್ತಿರುವುದಿಲ್ಲ. ನಾಮಿಕ, ಅನಾಮಿಕ ಕಲಾವಿದರಿಗೆ ಒಂದು ನಮೋ ಹೇಳೋಣ.
ಭಾರತದ ಕಡು ಬೇಸಿಗೆಯಲ್ಲಿ ಬರುವ ರಾಮನವಮಿ ಹಬ್ಬ ಅನೇಕ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ. ಶಾಲಾ ಪರೀಕ್ಷೆಗಳು ಮುಗಿದು ಬಾಲಕರಿಗೆ ಮರಕೋತಿ ಆಡುವ ಸಮಯ. ಬಾಲಕಿಯರಿಗೆ ಚೌಕಾಭಾರ, ಘಟಗೋಣಿಮಣೆ, ಕುಂಟಾಬಿಲ್ಲೆ ಆಡುವ ಬೇಸಿಗೆ ರಜಾ ಮಜಾ. ರೆಫ್ರಿಜಿರೇಟರಿಗೆ ಸೆಖೆಯಾಗುವಷ್ಟು ಸೂರ್ಯನ ಬೇಗೆಯಿಂದ ಅಲ್ಪ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಋತುಮಾನಕ್ಕೆ ತಕ್ಕಂತೆ ಆಹಾರ, ಪಾನೀಯ.
ಶಿವರಾತ್ರಿಗೆ ಆರಂಭವಾಗುವ ಬೇಸಿಗೆ ಕಾಲಕ್ಕೆ ಸರಿಯಾಗಿ ಬೇಲದ ಹಣ್ಣಿನ ಪಾನಕ. ಯುಗಾದಿಗೆ ಪ್ರಕೃತಿಯೇ ಕರುಣಿಸಿದ ಮಾವು ಬೇವು ಬೆಲ್ಲ. ರಾಮನವಮಿಗೆ ನಾನಾ ಬಗೆಯ ಪೇಯಗಳು. ಕಲ್ಲಂಗಡಿ, ಕರಬೂಜಾ, ನಿಂಬೆ ಹಣ್ಣಿನ ರಸ ಸೇವನೆಗೆ ಸಕಾಲ. ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಬೇಸಿಗೆಯಲ್ಲೇ ಫಲಕೊಡುವುದು ಡಿವೈನ್ ಕಾನ್ಸಪಿರಸಿ! ಹಣ್ಣುಗಳ ಜತೆಗೆ ತಂಪು ಪದಾರ್ಥ ಹೆಸರುಬೇಳೆ ಕೋಸಂಬರಿಗೂ ರಾಮನವಮಿಗೂ ಬಿಡಿಸಲಾರದ ನಂಟು. ನಾಲಕ್ಕು ಸೌತೇಕಾಯಿ ಹೋಳು, ಎರಡು ಲೋಟ ನೀರು ಮಜ್ಜಿಗೆಯನ್ನು ಪಡೆದವನೇ ಭಾಗ್ಯವಂತ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶ್ರೀರಾಮಚಂದ್ರನ ದೇವಾಲಯಗಳು ಕಾಣಿಸುತ್ತವೆ. ಹಾಗೆ ನೋಡಿದರೆ ರಾಮನಿಗಿಂತ ಅವನ ಪರಮಭಕ್ತ ಆಂಜನೇಯನಿಗೆ ಮೀಸಲಾದ ಗುಡಿಗಳೇ ದೇಶದಲ್ಲಿ ಜಾಸ್ತಿ. ಅಂತೆಯೇ, ರಾಮಮಂದಿರಗಳಲ್ಲಿ ಮತ್ತು ಆಂಜನೇಯನ ಗುಡಿಗಳಲ್ಲಿ ನಾಳೆ ವಿಶೇಷ ಪೂಜೆ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರುತ್ತವೆ.
ರಾಮನ ಜತೆಗೆ ಭಾತೃ ಪ್ರೇಮಕ್ಕೆ ಹೆಸರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಪ್ರತ್ಯೇಕವಾದ ದೇಗುಲಗಳು ಅಷ್ಟಾಗಿ ಕಂಡುಬಾರವು. ಇವರೆಲ್ಲ ಒಟ್ಟಾಗಿ ದೇಗುಲಗಳಲ್ಲಿ ಕಾಣುವುದು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಮಾತ್ರ. ಈ ಎರಡು ಸ್ಥಳಗಳಲ್ಲಿ ಹೊರತುಪಡಿಸಿ ಮತ್ತೆಲ್ಲೂ ಇಲ್ಲ ಎಂದು ನನ್ನ ತಿಳಿವಳಿಕೆ ಹೇಳುತ್ತದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇಲ್ಲಿ ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.
ಈ ದೇಗುಲಕ್ಕೆ ಪುರಾಣ ಐತಿಹ್ಯವಿದೆ. ರಾಮ ಸೀತೆ ಲವಕುಶರನ್ನು ಲಾಲಿಸಿದುದು ಇಲ್ಲೇ ಎನ್ನುವ ನಂಬಿಕೆ ಸ್ಥಳೀಯರಿಗಿದೆ. ಈ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟವನ್ನು 'ಸೀತಮ್ಮ ಕೊಂಡ' ಎಂದು ಕರೆಯುತ್ತಾರೆ . ಇಲ್ಲಿ ವರ್ಷಕ್ಕೊಮ್ಮೆ ದನಗಳ ಜಾತ್ರೆ ನಡೆಯುತ್ತದೆ.(ಇತ್ತೀಚೆಗೆ ಆ ಜಾತ್ರೆ ನಡೆಯಿತು)ಆಗ ದೂರದೂರಿಂದ ರೈತರು ಬಂದು ಎತ್ತುಗಳನ್ನು ಕೊಳ್ಳುತ್ತಾರೆ. ಈ ಬೆಟ್ಟದ ತಪ್ಪಲಲ್ಲಿ ಶಾರದಾಂಬೆಯ ದೇಗುಲವಿದೆ. ಇಷ್ಟಪಟ್ಟವರು ಬೆಂಗಳೂರಿನಿಂದ (ಸುಮಾರು 80ಕಿಮಿ) ಸೀದಾ ಅಲ್ಲಿಗೆ ಹೋಗಿ 'ಮೆಸರ್ಸ್ ರಾಮ್ ಅಂಡ್ ಬ್ರದರ್ಸ್' ದೇವಸ್ಥಾನವನ್ನು ನೋಡಿಕೊಂಡು ಬರಬಹುದು.
ಇ೦ತಹುದೇ ಮತ್ತೊಂದು ಸ್ಥಳ ಕೇರಳದಲ್ಲಿದೆ. ಇಲ್ಲಿಯೂ ಈ ಅಣ್ಣತಮ್ಮಂದಿರ ಪ್ರತ್ಯೇಕ ದೇಗುಲಗಳು ಇವೆ. ಮಲಯಾಳದಲ್ಲಿ ಇದನ್ನು ನಲಂಬಲಂ ಎಂದು ಕರೆಯುತ್ತಾರೆ. ರಾಮನಿಂದ ಆರಂಭಿಸಿ ಆ ಬಳಿಕ ಶತ್ರುಘ್ನ ದೇಗುಲ ನೋಡುವುದರ ಮೂಲಕ ಮುಕ್ತಾಯ ಹಾಡುವ ಪದ್ಧತಿ ಇಲ್ಲಿದೆ. ಈ ದೇವಾಲಯ ತಿರುಚ್ಚಿ ಜಿಲ್ಲೆಯ ರಾಮಪುರದಲ್ಲಿದೆ. ಆವಣಿಯಂತೆ ಇಲ್ಲಿ ಎಲ್ಲಾ ಅಣ್ಣ ತಮ್ಮಂದಿರು ಜಾಯಿಂಟ್ ಫ್ಯಾಮಿಲಿ ಥರ ಒಟ್ಟಾಗಿ ಇಲ್ಲ. ಟ್ಯಾಕ್ಸಿ ಮೂಲಕ ಅಷ್ಟೂ ದೇಗುಲಗಳನ್ನು ಬೇರೆಬೇರೆಯಾಗಿ ಸಂದರ್ಶಿಸಬಹುದು.ಕೇವಲ ರಾಮಪುರದಲ್ಲಿ ಮಾತ್ರವಲ್ಲದೆ ಕೊಟ್ಟಾಯಂ, ಎರ್ನಾಕುಲಂ, ಮಲಪ್ಪುರಂ ಜಿಲ್ಲೆಗಳಲ್ಲೂ ಈ ಅಣ್ಣ ತಮ್ಮಂದಿರ ದೇಗುಲಗಳು ಇವೆ. ಟೈಮ್ ಇದ್ದಾಗ ಒಮ್ಮೆ ಹೋಗಿ ಅಣ್ಣತಮ್ಮಂದಿರ ಒಗ್ಗಟ್ಟು ಕಾಣಿರಿ!


ಶ್ರೀ ರಾಮರಕ್ಷಾ ಸ್ತೋತ್ರ


ರಚನ: ಬುಧ ಕೌಶಿಕ ಋಷಿ
ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ ಬುಧಕೌಶಿಕ ಋಷಿಃ
ಶ್ರೀ ಸೀತಾರಾಮ ಚಂದ್ರೋದೇವತಾ
ಅನುಷ್ಟುಪ್ ಛಂದಃ
ಸೀತಾ ಶಕ್ತಿಃ
ಶ್ರೀಮಾನ್ ಹನುಮಾನ್ ಕೀಲಕಂ
ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ
ಧ್ಯಾನಮ್ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ
ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್
ವಾಮಾಂಕಾರೂಢ ಸೀತಾಮುಖ ಕಮಲ ಮಿಲಲ್ಲೋಚನಂ ನೀರದಾಭಂ
ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್
ಸ್ತೋತ್ರಮ್ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್
ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್
ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್
ಜಾನಕೀ ಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್
ಸಾಸಿತೂಣ ಧನುರ್ಬಾಣ ಪಾಣಿಂ ನಕ್ತಂ ಚರಾಂತಕಮ್
ಸ್ವಲೀಲಯಾ ಜಗತ್ರಾತು ಮಾವಿರ್ಭೂತಮಜಂ ವಿಭುಮ್
ರಾಮರಕ್ಷಾಂ ಪಠೇತ್ಪ್ರಾಙ್ಞಃ ಪಾಪಘ್ನೀಂ ಸರ್ವಕಾಮದಾಮ್
ಶಿರೋ ಮೇ ರಾಘವಃ ಪಾತುಫಾಲಂ ದಶರಥಾತ್ಮಜಃ
ಕೌಸಲ್ಯೇಯೋ ದೃಶೌಪಾತು ವಿಶ್ವಾಮಿತ್ರ ಪ್ರಿಯಃ ಶೃತೀ
ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತ ವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಸುಗ್ರೀವೇಶಃ ಕಟೀಪಾತು ಸಕ್ಥಿನೀ ಹನುಮತ್-ಪ್ರಭುಃ
ಊರೂ ರಘೂತ್ತಮಃ ಪಾತು ರಕ್ಷಕುಲ ವಿನಾಶಕೃತ್
ಜಾನುನೀ ಸೇತುಕೃತ್ ಪಾತು ಜಂಘೇ ದಶಮುಖಾಂತಕಃ
ಪಾದೌವಿಭೀಷಣ ಶ್ರೀದಃಪಾತು ರಾಮೋ‌உಖಿಲಂ ವಪುಃ
ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್
ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್
ಪಾತಾಳ ಭೂತಲ ವ್ಯೋಮ ಚಾರಿಣಶ್-ಚದ್ಮ ಚಾರಿಣಃ
ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ
ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾಸ್ಮರನ್
ನರೋ ನಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ
ಜಗಜ್ಜೈತ್ರೈಕ ಮಂತ್ರೇಣ ರಾಮನಾಮ್ನಾಭಿ ರಕ್ಷಿತಮ್
ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವ ಸಿದ್ಧಯಃ
ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್
ಅವ್ಯಾಹತಾಙ್ಞಃ ಸರ್ವತ್ರ ಲಭತೇ ಜಯ ಮಂಗಳಮ್
ಆದಿಷ್ಟವಾನ್ ಯಥಾಸ್ವಪ್ನೇ ರಾಮ ರಕ್ಷಾ ಮಿಮಾಂ ಹರಃ
ತಥಾ ಲಿಖಿತವಾನ್ ಪ್ರಾತಃ ಪ್ರಬುದ್ಧೌ ಬುಧಕೌಶಿಕಃ
ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್
ಅಭಿರಾಮ ಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ಸನಃ ಪ್ರಭುಃ
ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ
ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾ ಜಿನಾಂಬರೌ
ಫಲಮೂಲಾಸಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ
ಶರಣ್ಯೌ ಸರ್ವಸತ್ವಾನಾಂ ಶ್ರೇಷ್ಟಾ ಸರ್ವ ಧನುಷ್ಮತಾಂ
ರಕ್ಷಃಕುಲ ನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ
ಆತ್ತ ಸಜ್ಯ ಧನುಷಾ ವಿಷುಸ್ಪೃಶಾ ವಕ್ಷಯಾಶುಗ ನಿಷಂಗ ಸಂಗಿನೌ
ರಕ್ಷಣಾಯ ಮಮ ರಾಮಲಕ್ಷಣಾವಗ್ರತಃ ಪಥಿಸದೈವ ಗಚ್ಛತಾಂ
ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ
ಗಚ್ಛನ್ ಮನೋರಥಾನ್ನಶ್ಚ ರಾಮಃ ಪಾತು ಸ ಲಕ್ಷ್ಮಣಃ
ರಾಮೋ ದಾಶರಥಿ ಶ್ಶೂರೋ ಲಕ್ಷ್ಮಣಾನುಚರೋ ಬಲೀ
ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ
ವೇದಾಂತ ವೇದ್ಯೋ ಯಙ್ಞೇಶಃ ಪುರಾಣ ಪುರುಷೋತ್ತಮಃ
ಜಾನಕೀವಲ್ಲಭಃ ಶ್ರೀಮಾನಪ್ರಮೇಯ ಪರಾಕ್ರಮಃ
ಇತ್ಯೇತಾನಿ ಜಪೇನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ
ಅಶ್ವಮೇಥಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನಸಂಶಯಃ
ರಾಮಂ ದೂರ್ವಾದಳ ಶ್ಯಾಮಂ ಪದ್ಮಾಕ್ಷಂ ಪೀತಾವಾಸಸಂ
ಸ್ತುವಂತಿ ನಾಭಿರ್-ದಿವ್ಯೈರ್-ನತೇ ಸಂಸಾರಿಣೋ ನರಾಃ
ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುತ್ಸಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ
ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ
ವಂದೇಲೋಕಾಭಿರಾಮಂ ರಘುಕುಲ ತಿಲಕಂ ರಾಘವಂ ರಾವಣಾರಿಮ್
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಥಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ
ಶ್ರೀರಾಮ ಚಂದ್ರ ಚರಣೌ ಮನಸಾ ಸ್ಮರಾಮಿ
ಶ್ರೀರಾಮ ಚಂದ್ರ ಚರಣೌ ವಚಸಾ ಗೃಹ್ಣಾಮಿ
ಶ್ರೀರಾಮ ಚಂದ್ರ ಚರಣೌ ಶಿರಸಾ ನಮಾಮಿ
ಶ್ರೀರಾಮ ಚಂದ್ರ ಚರಣೌ ಶರಣಂ ಪ್ರಪದ್ಯೇ
ಮಾತಾರಾಮೋ ಮತ್-ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ
ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ
ನಾನ್ಯಂ ಜಾನೇ ನೈವ ನ ಜಾನೇ
ದಕ್ಷಿಣೇಲಕ್ಷ್ಮಣೋ ಯಸ್ಯ ವಾಮೇ ಚ ಜನಕಾತ್ಮಜಾ
ಪುರತೋಮಾರುತಿರ್-ಯಸ್ಯ ತಂ ವಂದೇ ರಘುವಂದನಮ್
ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶನಾಥಂ
ಕಾರುಣ್ಯರೂಪಂ ಕರುಣಾಕರಂ ತಂ
ಶ್ರೀರಾಮಚಂದ್ರಂ ಶರಣ್ಯಂ ಪ್ರಪದ್ಯೇ
ಮನೋಜವಂ ಮಾರುತ ತುಲ್ಯ ವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ
ವಾತಾತ್ಮಜಂ ವಾನರಯೂಧ ಮುಖ್ಯಂ
ಶ್ರೀರಾಮದೂತಂ ಶರಣಂ ಪ್ರಪದ್ಯೇ
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ
ಆರುಹ್ಯಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್
ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಂ
ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಂ
ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಮ್
ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ
ಇತಿ ಶ್ರೀಬುಧಕೌಶಿಕಮುನಿ ವಿರಚಿತಂ ಶ್ರೀರಾಮ ರಕ್ಷಾಸ್ತೋತ್ರಂ ಸಂಪೂರ್ಣಂ
ಶ್ರೀರಾಮ ಜಯರಾಮ ಜಯಜಯರಾಮ

Comments

Popular posts from this blog

ನಾಗ ಪಂಚಮಿ ಕಥೆ : ಪುರಾಣ : ನಾಗ ಪಂಚಮಿಯ ವೈಶಿಷ್ಟ್ಯ: ಉಪವಾಸದ ಮಹತ್ವ:ನಾಗನ ಮಹಾತ್ಮೆ:ಪೂಜೆ

ತುಳುವೆರೆನ ಪೊಸ ವರ್ಸ ಬತ್ತ್ಂಡ್ ಬಿಸು ಪರ್ಬ

ಮಾತಾ ತುಳುವ ಅಪ್ಪೆ ಜೊಕೂಲೆಗ್ "ಆಟಿ ಅಮಾವಾಸ್ಯೆ ದ ಶುಭಾಶಯಲೋ.."